Tourism

ಮಾಹಿತಿ ಸಂಗ್ರಹಣೆ : ಚಂದ್ರಶೇಖರ ಮೋರೆ. ಉದಯವಾಣಿ ವರದಿಗಾರರು,ಮಹಾಲಿಂಗಪುರ

------------------------------------------------------------------------------------------------------------------------------------------------------------------------------------------------------ 

ಮಹಾ ಜಾತ್ರೆ

ಪವಾಡ ಪುರುಷ ಶ್ರೀ ಮಹಾಲಿಂಗೇಶ್ವರರ

ಹಿನ್ನೆಲೆ ಹಾಗೂ ಇತಿಹಾಸ :

 

    ಬಾಗಲಕೋಟ ಜಿಲ್ಲೆ ಮುಧೋಳ ತಾಲೂಕಿನ ಮಹಾಲಿಂಗಪುರವು ಕಲೆ,ಸಾಹಿತ್ಯ,ಅಧ್ಯಾತ್ಮ,ಶಿಕ್ಷಣ,ವಾಣಿಜ್ಯ ಕ್ಷೇತ್ರಗಳಲ್ಲಿ ತನ್ನದೆ ಕೊಡುಗೆ ನೀಡುತ್ತದೆ.

       ಇಲ್ಲಿನ ಕ್ಷೇತ್ರಾಧಿಪತಿ ಪವಾಡ ಪುರುಷ ಭಕ್ತರ ಭಾಗ್ಯದಾತ,ಮಹಾತಪಸ್ವಿ,ಶಿವಸ್ವರೂಪಿ,ಆರಾಧ್ಯ ದೈವ,ಶ್ರೀಮಹಾಲಿಂಗೇಶ್ವರ ದೇವಸ್ಥನವು ಬಹಳ ಪ್ರಸಿದ್ಧಿಯಾಗಿದ್ದು ಮಹಾಲಿಂಗೇಶ್ವರ ದರ್ಶನಕ್ಕೆ ರಾಜ್ಯ ಅಷ್ಟೆ ಅಲ್ಲನೆರೆಯ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಬಂದು ದರ್ಶನಗೈದು ಪುನೀತರಾಗುತ್ತಾರೆ.

           ತಾಲೂಕು ಕೇಂದ್ರ ಮುಧೋಳದಿಂದ ಪಶ್ಚಿಮಕ್ಕೆ 20ಕಿ.ಮೀ ದೂರದಲ್ಲಿರುವ ಮಹಾಲಿಂಗಪುರವು ಸ್ವತಂತ್ರ ಪೂರ್ವದಲ್ಲಿ ಮುಧೋಳ ಸಂಸ್ಥಾನಕ್ಕೆ ಸೇರಿತ್ತು.ಪಟ್ಟಣದ ಪೂರ್ವ ನಾಮ ನರಗಟ್ಟಿ ಎಂಬುವುದಾಗಿತ್ತು. ಮಹಾಲಿಂಗಪುರವು ಸರ್ವ ಧರ್ಮ ಸಾಮರಸ್ಯದ ನೇಲೆಬೀಡಾಗಿದೆ.ಸುಸಜ್ಜಿತ ಬೆಲ್ಲದ ಮಾರುಕಟ್ಟೆಯನ್ನು ಹೊಂದಿರುವ ಮಹಾಲಿಂಗಪುರ ನಾಡಿನಲ್ಲೆಡೆ ಬೆಲ್ಲದ ಸೊಬಗಿನ ಪ್ರದೇಶವೆಂದೇ ಖ್ಯಾತಿ ಪಡೆದಿದೆ.

 

ಮಹಾಲಿಂಗೇಶ್ವರರ ಸಂಚಾರ :

ಭೂಲೋಕದ ಉದ್ಧಾರಕ್ಕೆ,ಧರ್ಮದ ಉಳಿವಿಗೆ,ಪರಶಿವನು ತನ್ನ ಭಕ್ತ ನಂದೀಶನನ್ನು ಮಹಾಲಿಂಗ ಜಂಗಮರ ರುಪದಲ್ಲಿ ಭೂಲೋಕಕ್ಕೆ ಕಳುಹಿಸಿದ್ದ ಶೀವನ ಅಪ್ಪಣೆ ಮೇರೆಗೆ  ಭೂಮಿಗೆ ಬಂದ ಭಗವಂತನೇ ಈ ಮಹಾಲಿಂಗ ಜಂಗಮರು.

             ಮಹಾಲಿಂಗ ಜಂಗಮರು ಕಾಶಿ,ಶ್ರೀಶೈಲ,ತಿರುಪತಿ,ಕಮಚಿ,ಅರುಣಾದ್ರಿ,ಶಿವಗಂಗೆ,,ಉಳವಿ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಪುಣ್ಯ ಕ್ಷೇತ್ರಗಳಲ್ಲಿ ಸಂಚರಿಸಿ,ಶಿವಸ್ವಪ್ನದ ವಾಣಿಯಂತೆ ಇಂದಿನ ಮಹಾರಾಷ್ಟ್ರದ ಢಪಳಾಪುರದಲ್ಲಿರುವ ಗುರುಲಿಂಗ ಜಗದಾರ್ಯರಲ್ಲಿಗೆ ಬಂದು ಇವರ ಶಿಷ್ಯರಾಗಿ ಅಷ್ಟವರ್ಣಗಳ ಮಹಿಮೆ ತಿಳಿದುಕೊಂಡರು. ಗುರುಲಿಂಗ ಜಗದಾರ್ಯರರು ಹೃದಯ ತುಂಬಿ ಹರಿಸಿ ಮಹಾಲಿಂಗ ನೀನು ಸಂಚಾರ ಗೈಯುತ್ತ ಹೋಗುವಾಗ ಚೈತ್ರದರ್ಶಿ ದಿನ ಎಲ್ಲಿ ನಿಲ್ಲುವೆಯೊ ಅಲ್ಲಿಯೆ ಓರ್ವ ಶಿವಭಕ್ತೆ ನಿನ್ನನ್ನು ಬಯ-ಭಕ್ತಿಯಿಂದ ಬರಮಾಡಿಕೊಳ್ಳುವಳು.ಅದೇ ನಿನ್ನ ಕರ್ಮಭೂಮಿಯೆಂದೆ ತಿಳಿ.ಆ ಊರು ಯಾವುದೇ ಇರಲಿ ಅದೇ ಮುಂದೆ ನಿನ್ನ ಪ್ರಭಾವದಿಂದ ನಿನ್ನ ಹೆಸರಿನಿಂದಲೇ ಮೆರೆಯುವಂತಾಗುತ್ತದೆ ಎಂದು ಆರ್ಶೀವಧಿಸಿ ಶಿಷ್ಯನ್ನು ಹೆಮ್ಮೆಯಿಂದ ಬೀಳ್ಕೊಟ್ಟರು.

 

ಕೃಷ್ಣಾ ನದಿ ದಾರಿ ನೀಡಿದ್ದು :

ಮಹಾಲಿಂಗ ಜಂಗಮರು ಗುರುಗಳ ಆರ್ಶರ್ವಾದ ಪಡೆದು ಸಂಚಾರ ಮಾಡುತ್ತ ಉಪದೇಶ ನೀಡುತ್ತ ಮುಂದೆ ಸಾಗಲು ಕೃಷ್ಣಾ ನಧಿ ದಾಟಬೇಕಾಗಿತ್ತು,ಅದೆ ಸಮಯಕ್ಕೆ ಇಂದಿನ ಗೋಕಾಕ ತಾಲೂಕಿನ ದುರುದುಂಡೇಶ್ವರರು ಅಲ್ಲಿಗೆ ಆಗಮಿಸಿದರು,ಉಭಯ ಶ್ರೀಗಳು ನದಿಯ ತಟದಲ್ಲಿನಿಂತು ಪರಶಿನನ್ನು ಮನದಲ್ಲಿ ಸ್ಮರಿಸಿದಂತೆಯೆ ಇವರ ಭಕ್ತಿಗೆ ಒಲಿದು ಕೃಷ್ಣೆ ಶಿವಸ್ವರೂಪಿಗಾಳಾದ ತಮ್ಮ ದೀವ್ಯ ದರ್ಶನದಿಂದ ನಾನು ಪುನೀತಳಾದೆ ನಿಮ್ಮ ಪವಿತ್ರ ಪಾದಧೂಳಿನಿಂದ ದನ್ಯಳಾಗುವೆ.ನಡೆದು ಆಚೆ ದಡ ಸೇರಬನ್ನಿ ಯತಿಪುಂಗವರೆ ಎಂದು ಭಿನ್ನವಸಿದಳು.ಅವಳಮಾತು ಮುಗಿಯುವಷ್ಟರಲ್ಲಿ ತುಂಬಿ ಹರಿಯುವ ಕೃಷ್ಣೆ ಇಭ್ಭಾಗವಾಗಿ ಮಹಾತ್ಮರ ಸುಖ ಪ್ರಯಾಣಕ್ಕೆ ದಾರಿ ನೀಡಿದಳು.

.

ನರಗಟ್ಟಿಗೆ ಮಹಾಲಿಂಗರ ಆಗಮನ :

 ಪವಾಡ ಸದೃಶ್ಯವಾಗಿ ಕೃಷ್ಣಾ ನದಿದಾಟಿದ ಮಹಾಲಿಂಗೇಶ್ವರರು ಮತ್ತು ದುರುದುಂಡೇಶ್ವರರು ಶಿವನ ಇಚ್ಚೆಯೆಂತೆ ಸಂಚಿರಿಸುತ್ತ ಮಹಾಲಿಂಗೇಶ್ವರರು ಮುಧೋಳ ಸಂಸ್ಥಾನ ನರಗಟ್ಟಿಗೆ ಆಗಮಿಸಿದರು.ಶಿವಸಪ್ನದ ವಾಣಿಯೆಂತೆ ಶಿವಭಕ್ತೆ ಸಿದ್ದಮಾಯಿ ಮಹಾಲಿಂಗ ಜಂಗಮರನ್ನು ಭೆಟ್ಟಿಯಾಗಿ ಆತ್ಮೀಯದಿಂದ ಬರಮಾಡಿಕೊಂಡು ಆಧರಾತಿಥ್ಯ.ಪೂಜೆ-ಪುನಸ್ಕಾರ ಸಲ್ಲಿಸಿದಳು ಅಂದು ಚೈತ್ರಶುದ್ಧ ಚತುರ್ದಶಿ ಸೋಮವಾರವಾದ್ದುದರಿಂದ ನರಗಟ್ಟಿಯಲ್ಲಿಯೇ ನೆಲೆಸಿ,ಗ್ರಾಮದ ದಕ್ಷಿಣ ದಿಕ್ಕಿನಲ್ಲಿಯ ಚನ್ನಗಿರಿ ಪರ್ವತವನ್ನು ತಮ್ಮ ಧ್ಯಾನ,ತಪಸ್ಸಿನ ಸ್ಥಳವನ್ನಾಗಿಸಿಕೊಂಡು ನರಗಟ್ಟಿಯನ್ನೇ ತಮ್ಮ ಕರ್ಮ ಬೂಮಿಯನ್ನಾಗಿ ಮಾಡಿಕೊಂಡು ಬರವ ಭಕ್ತರನ್ನು ಉದ್ದರಿಸುತ್ತ ಭಕ್ತಿ ಚಲುಮೆ ಚಿಮ್ಮಿಸತೊಡಗಿದರು.  

ಈಗಿನ ಚನ್ನಗಿರೇಶ್ಬರ ದೇವಸ್ಥಾನ

 

 


 

 

 

ಬಸವತೀರ್ಥ ನಿರ್ಮಾಣ :

ಜನರಿಗೆ ಉಪಯೋಗವಾಗುವಂತೆ  ಊರಿನ ಪಶ್ಚಿಮಕ್ಕೆ ಬಾವಿಯನ್ನು ತೋಡಬೆಕೆಂದು ಮಹಾಲಿಂಗ ಮುನಿಗಳು ಸಂಕಲ್ಪಿಸಿದರು ಇದರಂತೆ ದಾನಯ್ಯ ಎಂಬ ಶಿವಭಕ್ತನಿಗೆ ಬಾವಿ ತೋಡಿಸುವ ಮೇಲ್ವಿಚಾರಣೆ ವಹಿಸಿದರು.

                                      ಬಾವಿ ತೋಡುವಾಗ ಬೃಹದಾಕಾರದ ಬಂಡೆಯೊಂದು ಅಡ್ಡವಾಯತು ಎಷ್ಟು ಒಡೆಯಲು ಪ್ರಯತ್ನಿಸಿದರು ಬಂಡೆ ಒಡಯಲಿಲ್ಲ.ಈ ವಿಷಯ ಶ್ರೀಗಳಿಗೆ ತಿಳಿಸಿದನು.ಶ್ರೀಗಳು ದಾನಯ್ಯನಿಗೆ ಬಸವಾ ಎಂಬ ಮುರಕ್ಷರಗಳನ್ನು ಸ್ಮರಿಸಿ ಆ ಕಲ್ಲು ಪಡೆಯ ಮಧ್ಯದಲ್ಲಿ ಹೊಡೆಯಲು ತಿಳಿಸಿದರು ಶ್ರೀಗಳ ಅಣತಿಯಂತೆ ಬಸವಾ ಎಂಬ ಮಂತ್ರವನ್ನು ಸ್ಮರಿಸಿ ಬಂಡೆಯ ಮಧ್ಯಭಾಗದಲ್ಲಿ ಒಡೆಯಲು ಬಂಡೆ ಚೂರು ಚೂರಾಗಿ ಗಂಗೆಯು ತಾನೆ ಒಲಿದು ಹೊರ ಚಿಮ್ಮಿದಳು.ಪವಿತ್ರ  ಗಂಗಾಜಲದಂತಿರುವ ತೀರ್ಥ ದೊರಕಿದ್ದರಿಂದ ಮಹಾಲಿಂಗೇಶ್ವರರು ಅದಕ್ಕೆ ಬಸವತೀರ್ಥ ಎಂದು ನಾಮಕರಣ ಮಾಡಿದರು.

                                    ಅಂದು ಮಹಾಲಿಂಗ ಜಂಗಮರು ನಿರ್ಮಿಸಿದ ಬಸವ ತೀರ್ಥ ಇಂದು ಅಪ್ಪನವರ ಭಾವಿ ಎಂದು ಪ್ರಸಿಧ್ಧಿಯಾಗಿದೆ. ಇಲ್ಲಿಯ ಜಲವನ್ನು ಪೂಜೆ ಪುನಸ್ಕಾರಗಳಿಗೆ ಮಾತ್ರ ಬಳಸುತ್ತಿದ್ದಾರೆ.

ಅಪ್ಪನವರ ಭಾವಿ

ಪವಾಡ ಪುರುಷ ಮಹಾಲಿಂಗ ಜಂಗಮರು :

  • ರುದ್ರಮ್ಮನಿಗೆ ದೃಷ್ಠಿದಾನ ಮಾಡಿದ್ದು.
  • ಸತ್ತ ಮಗುವಿಗೆ ಜೀವದಾನ
  • ಅಷ್ಠ ಲಿಂಗ ಮುದ್ರೆ ಸ್ಥಾಪನೆ. : ನರಗಟ್ಟಿಯು ಶ್ರೀಗಳ ಅಪ್ಪಣೆಯಂತೆ ಎಂಟು ದಿಕ್ಕುಗಳಲ್ಲಿಲಿಂಗಮುದ್ರೆಗಳನ್ನು ಸ್ಥಾಪಿಸಿದರು

 

ಸಿದ್ದಾಯಿಗೆ ಜಡೆಗಳ ಅನುಗ್ರಹ :

 ಭಕ್ತರ ಭಾಗ್ಯದಾತ ಮಹಾಲಿಂಗೇಶ್ವರರು ಲಿಂಗೈಕ್ಯ ಸಮಯದಲ್ಲಿ ಶಿವಭಕ್ತೆಯ ಶಿದ್ದಾಯಿ ಬಯಕೆಯಂತೆ ತಮ್ಮ ಇರುವಿಕೆಯ ಗುರುತಿಗಾಗಿ ತಮ್ಮ ಶಿರದಲ್ಲಿಯ ಐದೆಳೆ ಜಟಗಳನ್ನು ಪರವಾಗಿ ನೀಡಿ ಇಹಲೋಕ ತ್ಯಜಿಸಿದರು.ಸೂರ್ಯ ಚಂದ್ರ ಇರುವವರಿಗೂ ಜಟಗಳ ರೂಪದಲ್ಲಿ ತಾವಿರುವದಾಗಿ ಎಂದು ಹೇಳಿದ ಮಹಾಲಿಂಗೇಶ್ವರ ವಾಣಿಯಂತೆ ಇಂದು ವಿಜ್ಞಾನಕ್ಕೆ ಸವಾಲಾಗಿ ಪರಿಣಮಿಸಿ,ಜಟಗಳ ಪ್ರತಿವರ್ಷ ಬೆಳೆಯುತ್ತ ಇಂದು ಏಳು ಸುತ್ತಿನ ಸಿಂಬೆಯಾಗಿವೆ.ಶಿವಚೈತನ್ಯ ಶಿವಶಕ್ತಿಯನ್ನು ಹೊಂದಿ ಬೆಳೆಯುತ್ತಿವೆ.

 

ಬೆಳೆಯುತ್ತಿರುವ ಜಟಗಳೊಂದಿಗೆ ಶ್ರೀಮಠದ ಪೀಠಾಧಿಪತಿಗಳು ಜಗದ್ಗುರು ಮಹಾಲಿಂಗಪುರದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು

 

 

ಜಟಾಭಿಷೇಕ ಅವ್ಯಾಹತ: ಜಟಗಲ ಮಹಿಯಿಂದ ತಮ್ಮ ಕಷ್ಟಗಳಿಂದ ಪಾರಾಗಿ ಇಷ್ಟಾರ್ಥಗಳನ್ನು ಪಡೆದ ಅನೇಕ ಭಕ್ತರು ಪ್ರತಿವರ್ಷ ಅದರಲ್ಲೂ ಶ್ರಾವಣ ಮಾಸದಲ್ಲಿ ಜಟಾಭಿಷೇಕ ಮಾಡಿಸುವುದು ಇಂದಿಗೂ ನೆಡೆಯುತ್ತಿದೆ .


ಜಾತ್ರಾ ಮಹೋತ್ಸವದಂದು ಶ್ರೀ ಚನ್ನಗಿರೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಜಟಾಭಿಷೇಕ ಕೈಗೊಳ್ಳುತ್ತಿರುವ ಶ್ರೀಮಠದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು



 

 

 

ಪೂಜಾ- ವಿಧಿವಿಧಾನ

ಶ್ರೀಮಠದಲ್ಲಿ ಪ್ರತಿದಿನ ಪ್ರಾತಃ 5 ,ಮದ್ಯಾನ್ಹ 12,ರಾತ್ರಿ 9 , ಘಂಟೆಗೆ ಹೀಗೆ ಮೂರೋತ್ತು ವಿಶೇಷ ಪೂಜೆ ಜರಗುತ್ತದೆ .ಈ ಸಮಯದಲ್ಲಿ ಪಟ್ಟಣದ ಕರಡಿ ಮಜಲಿನವರು ಅನಾದಿ ಕಾಲದಿಂದಲೂ ತಮ್ಮ ತಂಡದೊಂದಿಗೆ ಪ್ರತಿ ನಿತ್ಯ ತಪ್ಪದೆ ಸೇವೆಯನ್ನು ಸಲ್ಲಿಸುತ್ತಾರೆ

 

 

ಐದೇಶಿ-ಕಾರ್ತಿಕೋತ್ಸವ

          ಮಹಾಲಿಂಗೇಶ್ವರ ಪರಮ ಭಕ್ತರಾದ ಇಲ್ಲಿನ ಜನತೆ ಪ್ರತಿ ವರ್ಷ ಐದೇಶಿ ಮತ್ತು ಕಾರ್ತಿಕೋತ್ಸವ ಆಚರಿಸುತ್ತಾರೆ. ಈ ಎರಡೂ ತಿಂಗಳ ಅವಧಿಯಲ್ಲಿ ಪಟ್ಟಣದ ಜನತೆ ಯಾವುದೆ ಅಲಂಕಾರಿಕ ವಸ್ತುಗಳು,ಗೃಹ ಉಪಯೋಗಿ ವಸ್ತುಗಳು,ಮಂಗಲ ಕಾರ್ಯಗಳನ್ನು ಮಾಡುವಂತಿಲ್ಲ ಹಿಂತ ಹಲವಾರು ನಿಯಮಗಳನ್ನು ಇಲ್ಲಿ ತಪ್ಪದೆ ಆಚರಿಸುತ್ತಾರೆ.

                       ಮುಖ್ಯವಾಗಿ ಕಾರ್ತಿಕ ಮಾಸ ಪ್ರಾರಂಭ ನಂತರ ಯಾರಾದರೂ ಪರ ಉರಿಗೆ ಹೋದರೆ,ಕಾರ್ತಿಕೋತ್ಸವದಂದು ಸಾಯಾಂಕಾಲ ಕಡ್ಡಾಯವಾಗಿ ಉರಿಗೆ ಮರಳಿ ಬರಲೇಬೇಕೆಂಬ ವಡಿಕೆ ಇದೆ. ಇದು ಇಲ್ಲಿನ ಜನತೆ ಆಚರಿಸಿಕೊಂಡುಬಂದ ವಿಶಿಷ್ಠ ಪದ್ದತಿ.

 

ಹರಿವಾಣ ಕಟ್ಟೆ ಲೂಟಿ

ತುಂಬಿದ ತೇರಿನ ದಿನ ಸಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹರಿವಾಣ ಕಟ್ಟೆ ಲೂಟಿ ಕಾರ್ಯಕ್ರಮ ಜರಗುತ್ತದೆ.ಹರಿವಾಣ ಕಟ್ಟೆಯ ಲೂಟಿ ಎಂದರೆ,ಭಕ್ತರು ತಮ್ಮ ತಮ್ಮ ಜಮೀನುಗಳಲ್ಲಿ ಬೆಳೆದಂತಹ ಕಬ್ಬು,ಗೋವಿನಜೋಳ,ಸೇರಿದಂತೆ ಹಲವು ಭೆಳೆಗಳನ್ನು ಒಂದಡೆ ಸೇರಿಸಿ,ಪೂಜಿಸಿ ಶ್ರೀಗಳ ಮಂಗಳಾರತಿ ನಂತರ ಅಲ್ಲಿನ ಕಬ್ಬು ,ತೇನೆ ,ತಪ್ಪಲು ಸೇರಿದಂತೆ ಪ್ರತಿಯೊಂದನ್ನು ಭಕ್ತರು ತಾ ಮುಂದು ನಾ ಮುಂದು ಎಂದು ದೋಚಿಕೊಂಡು ಹೋಗಿ ಮನೆಯಲ್ಲಿ ಇಟ್ಟು ಮುಂದಿನ ವರ್ಷದವರಿಗೆ ಅದನ್ನು ಪೂಜಿಸುತ್ತಾರೆ.ಈ ಹರಿವಾನ ಕಟ್ಟೆ ಸೇವೆ ಮಾಡುವದರಿಂದ ರೈತರು ಬೆಳೆಯುವ ಬೆಳೆಗಳು ಹಾಗೂ ಮನೆಯಲ್ಲಿ ಸದಾ ಅನ್ನಕ್ಕೆ ಕೊರತೆ ಇರುವದಿಲ್ಲ ಎಂಬ ಆಗಾಧ ವಿಶ್ವಾಸ ಇಲ್ಲಿನ ಜನತೆಯಲ್ಲಿದೆ.


ಶ್ರೀ ಶಿವಯೋಗಿ ಮಹಾಲಿಂಗೇಶ್ವರರ ರಥೋತ್ಸವ


 

ನಂದಿಕೋಲು ಉತ್ಸವ

                   

 ಪ್ರತಿ ಸೋಮವಾರ ಶ್ರೀಮಠದಿಂದ ರೇವಡಗಿಡದ ಮಹಾಲಿಂಗೇಶ್ವರ ದೇವಸ್ಥಾನವರೆಗೆ ನಂದಿಕೋಲ ಉತ್ಸವ ಚಾಚು ತಪ್ಪದೆ ಜರುಗುತ್ತದೆ. ಮಾರ್ಗ ಮಧ್ಯೆ ಭಕ್ತಾಧಿಗಳು ನಂದಿಕೋಲುಗಳಿಗೆ ನೀರು ಹಾಕಿ ಪೂಜೆ ಸಲ್ಲಿಸುತ್ತಾರೆ.ಇದಕ್ಕಾಗಿ ಶ್ರೀ ಚನ್ನಗೀರೇಶ್ವರ ದೇವಸ್ಥನದಿಂದ 200 ಜನ ,ಮಹಾಲಿಂಗೇಶ್ವರ ದೇವಸ್ಥನದಿಂದ 200 ಜನ ಸೇವಕರ ತಂಡ ರಚನೆಯಾಗಿದೆ.

----------------------------------------------------------------------------------------


 

ಮಹಾಲಿಂಗಪುರಕ್ಕೆ ತಲುಪಲು ಮಾರ್ಗ

          ಬಸ್ : ಬಾಲಕೋಟೆ ದಿಂದ 80 ಕೀ.ಮೀ

ಟ್ರೇನ್ : ಕುಡಚಿ ದಿಂದ 45 ಕೀ.ಮೀ

ವಿಮಾನ : ಹುಬ್ಬಳ್ಳಿ ಹಾಗೂ ಬೆಳಗಾಂವ ಸುಮಾರು 130 ಕೀ.ಮೀ


 

 ---------------------------------------------------------------------------------------------------------------------------------------------------------


Last Date of Updation : 24.09.2011

 

No. Of Visitors :
Last Updated   : 22/02/2012 Release History
Release 2.0.0, Powered By Karnataka Municipal Data Society & maintained by Mahalingapura TMC
This website can best viewed with the resolution 1024 * 768 using Internet Explorer 7.0 or above.
Valid CSS!